ಗಾಂಧಿ!
ಕೈಲಾಗದ ಕಾರಣ
ಅಹಿಂಸೆಯೆಂದನಲ್ಲ
ಸುಳ್ಳು ಹೇಳಿದ್ನಲ್ಲ
ಬೀಡಿ ಸೇದಿದ್ನಲ್ಲ
ಕಳ್ಳತನ ಮಾಡಿದ್ನಲ್ಲ
ಆ ಬೊಕ್ಕತಲೆಯ
ಮಾಂಸವಿಲ್ಲದ
ಬಡಕಲ ದೇಹದ
ಹರೆ ಹುಚ್ಚಮುದುಕನೇ
ತಾನೇಗಾಂಧಿ ಅಂದ್ರೆ!
ವಿಳಾಸ
ಸ್ವಲ್ಪ ಮುಂದೆ ಹೋಗಿ
ಅಲ್ಲಿದೆ ರಾಜೀವ್ ಗಾಂಧಿ
ಸಮುದಾಯ ಭವನ !
ಅದರ ಬಲಕ್ಕೆ ಕತ್ತು
ತಿರುಗಿಸಿದರೆ ಕಾಣುತ್ತೆ
ಶ್ರೀ ಬಸವೇಶ್ವರ ಆಸ್ಪತ್ರೆ!
ಅದರ ಎಡದಲ್ಲಿದೆ
ಬಿ.ಆರ್.ಅಂಬೇಡ್ಕರ್ ರಸ್ತೆ !
ರಸ್ತೆಯ ಎಡ ಭಾಗದಲ್ಲಿ
ನೆಹರು ಕ್ರೀಡಾಂಗಣವಿದೆ!
ತಣ್ಣನೆಯ ಸೋನಿಯಾಗಾಂಧಿ ಉದ್ಯಾನವಿದೆ!
ಇನ್ನು ಕಣ್ಣಳತೆಯ ದೂರದಲ್ಲಿದೆ
ಇಂದಿರಾಗಾಂಧಿ ವಿಶ್ವವಿದ್ಯಾಲಯ!
ಅಲ್ಲೇ ಅಲ್ಲೇ
ನಮ್ಮ ಬಡ-ಬಡವ
ಗಾಂಧಿಮನೆ...ಮನೆಯಲ್ಲ... ಗುಡಿಸಲು!
ಕೊಲೆ
ಅಂದು ಗೋಡ್ಸೆಯಿಂದ
ಗಾಂಧಿಯ ಭೌತಿಕ ಕೊಲೆ!
ಇಂದು ನಮ್ಮಿಂದ
ಗಾಂಧಿಯ ಸೈದ್ಧಾಂತಿಕ ಕೊಲೆ!
Sunday, August 3, 2008
Subscribe to:
Post Comments (Atom)
6 comments:
ಕೈಲಾಗದ ಕಾರಣ
ಅಹಿಂಸೆಯೆಂದನಲ್ಲ
ಸುಳ್ಳು ಹೇಳಿದ್ನಲ್ಲ
ಬೀಡಿ ಸೇದಿದ್ನಲ್ಲ
ಕಳ್ಳತನ ಮಾಡಿದ್ನಲ್ಲ
ಆ ಬೊಕ್ಕತಲೆಯ
ಮಾಂಸವಿಲ್ಲದ
ಬಡಕಲ ದೇಹದ
ಹರೆ ಹುಚ್ಚಮುದುಕನೇ
ಹೌದು ಅದೇ ಮುದುಕನೇ ಗಾಂಧಿ,
ಸುಳ್ಳು ಹೇಳಿ ಅದೇ ಸುಳ್ಳನ್ನು ನಮ್ಮ ನಿಮ್ಮಂತೆ ಮತ್ತೆಂದು ಹೇಳಲಿಲ್ಲ, ಬೀಡಿ ಸೇದಿ, ಸೇದುವುದು ತಪ್ಪು ಅಂತ ಗೊತ್ತಾದ ಮೇಲೆ ನಮ್ಮ ನಿಮ್ಮಂತೆ ಮತ್ತೆಂದೂ ಸೇದಲಿಲ್ಲವಲ್ಲ, ಕಳ್ಳತನ ಮಾಡಿ ಕಳ್ಳತನ ತಪ್ಪು ಅಂತ ಗೊತ್ತಾದಮೇಲೆ ನಮ್ಮ ನಿಮ್ಮಂತೆ ಮುಂದೆಂದು ಕಳ್ಳತನ ಮಾಡುವುದಿಲ್ಲ ಅಂತ ಒಪ್ಪಿಕೊಂಡು ಬದುಕಿದನಲ್ಲ, ಆ ಬೊಕ್ಕತಲೆಯ
ಮಾಂಸವಿಲ್ಲದ
ಬಡಕಲ ದೇಹದ
ಹರೆ ಹುಚ್ಚಮುದುಕನೇ
ಆ ಮುದುಕನೇ ನಮ್ಮ ಗಾಂಧಿ ತಾತ. ತನ್ನ ತಪ್ಪನ್ನು ಒಪ್ಪಿಕೊಂಡು ಲೋಕಕ್ಕೆ ಸಾರಿ ನನ್ನ ನಿಮ್ಮಂತವರು ಇಂತಹ ಕವಿತೆಯನ್ನು ಬಯಲು ಅನುವು ಮಾಡಿಕೊಟ್ಟ ಎದೆಗಾರಿಕೆಯ ಮುದುಕ ನಮ್ಮ ಗಾಂಧಿ ತಾತ.
ಕೈಲಾಗದ ಕಾರಣ ಅಹಿಂಸೆವಾದಿಯಾಗಿದ್ದು ಗಾಂಧಿಯಲ್ಲ. ಏನು ಮಾಡದೆ ಬರಿ ಬೊಟ್ಟು ಮಾಡಿ ತೋರಿಸೋ ನಾವುಗಳೇ ಹೇಡಿಗಳು.
ಯಾಕ್ರಿ ನಟೇಶ ರವರೆ ನಿಮಗೆ ಬರೆಯಲು ಮತ್ತೇನು ಸಿಗಲಿಲ್ಲವೆ ನಿಮಗೆ???
ಯಾಕ್ರಿ ಏನೇನೋ ಬರೆದು ನಿಮ್ಮನ್ನು ನೀವು ಕೀಳು ಮಾಡಿ ಕೊಳ್ಳುತ್ತೀರ?
ಗಾಂಧಿ ಬಗ್ಗೆ ಸಾಯುವವರೆಗು ನೀವು ಈಗೆ ಬರೆದರೂ ಏನು ಆಗುವುದಿಲ್ಲ ಅವರೊಬ್ಬ ಸಂತ.
ಬೇರೆ ಏನಾದರು ಹೊಸತನ್ನು ಬರೆಯಿರಿ. ಬೇರೆಯವರ ತಪ್ಪು ಹುಡಿಕಿ ಬರೆಯುವುದು ನಮ್ಮ ಕಾಯಕವಾಗಬಾರದು. ಬೇರೆಯವರ ತಪ್ಪಿನಿಂದ ನಾವು ಕಲಿಯಬೇಕು. ಯಾಕೆ, ನೀವು ಎಂದೂ ತಪ್ಪು ಮಾಡಿಲ್ಲವ? ಸುಳ್ಳು ಹೇಳಿಲ್ಲವೆ? ಅಂಜಿಕೆ ಯಿಂದ ದೂರ ಸರಿದಿಲ್ಲವೆ? ಬೀಡಿ ಸಿಗರೇಟ್ ಸೇದಿಲ್ಲವೆ? ಯಾವತ್ತಾದರು ಎದೆಗಾರಿಕೆ ತೋರಿ ಇವನ್ನೆಲ್ಲ ಹೇಳಿ ಕೊಂಡಿದ್ದೀಯ?
Not bad.
Aadre tikisuva reeti idalla kukoo avare.
-Harish Kera
ಕುಕೂಊ ಅವರೇ,
ಗಾಂಧಿ ಕವನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ನಿಮ್ಮ ಟೀಕೆಯನ್ನು ನಾನು ಪ್ರೀತಿಯಿಂದ ಸ್ವಾಗತಿಸುತ್ತೇನೆ. ಆದರೆ ಒಪ್ಪುವುದಿಲ್ಲ. ಗಾಂಧಿ ಬಗೆಗಿನ ನನ್ನ ಇನ್ನೆರಡು ಕವನಗಳನ್ನು ನೀವು ಓದಿದ್ದರೆ, ನನ್ನನ್ನು ಸಂಶಯಿಸುತ್ತಿರಲಿಲ್ಲ! ಪದ್ಯ ನಿಮಗೆ ಆ ರೀತಿ ಧ್ವನಿಸಿರಬಹುದು. ನಮ್ಮ ನಡುವೆ ಗಾಂಧಿ ಪಾಡು ಕಂಡು, ಕಳವಳದಿಂದ ಬರೆದ ಸಾಲುಗಳವು. ಪದ್ಯವನ್ನು ಮತ್ತೊಮ್ಮೆ ಓದಿ. ಗಾಂಧಿಯನ್ನು ಅವಮಾನಿಸುವ ಉದ್ದೇಶ ನನಗಿಲ್ಲ ಎಂದಷ್ಟೆ ಹೇಳುತ್ತೇನೆ.
ಅಕ್ಷರ ಪ್ರೀತಿ ಮತ್ತು ಅಕ್ಷರ ಜಗಳ ಜಾರಿಯಲ್ಲಿರಲಿ..
-ಹ.ಚ. ನಟೇಶ ಬಾಬು
Glad to read the thoughts on this blogspot. Best wishes to Babu the bloger
Dear Natesh Babu, Your words on Gandhi is so EXPRESSIVE and perhaps very TRUE !!!
Coz only few people know well about Gandhi and the "Dark Side of the Indian History".
Best Wishes !
Shree Vyas.
Post a Comment