ಭಲೇ ಗೌಡ!
ದೇವೇಗೌಡರು ದೇಶದ ಬಗ್ಗೆ ಯೋಚನೆ ಮಾಡುತ್ತಾ ಮಲಗಿದ್ದರು. ಯಾಕೋ ಕಣ್ಬಿಟ್ಟು ನೋಡ್ತಾರೆ, ಪಕ್ಕದಲ್ಲಿ ಬ್ರಹ್ಮದೇವ! ಕೂಡಲೇ ಗೌಡ್ರು ತಮ್ಮ ಎರಡೂ ಕೈಗಳನ್ನೂ ಜೋಡಿಸಿ, ಅಡ್ಡಡ್ಡ ಬಿದ್ದರು. ಆಗ ಬ್ರಹ್ಮದೇವ ‘ಬೇಕಾದ ವರ ಕೇಳು’ ಎಂದ.
‘ಸಡನ್ನಾಗಿ ವರಕೇಳು ಎಂದರೆ ಕಷ್ಟ. ನಾಳೆ ಬಾ ಯೋಚಿಸಿ ಬರೆದಿಡ್ತೀನಿ’ ಎಂದ ದೇವೇಗೌಡರು ಸ್ವಲ್ಪ ಟೈಮ್ ಕೇಳಿದರು. ಹಗಲು ರಾತ್ರಿ ನಿದ್ದೆ ಗೆಟ್ಟು ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಸಿದ್ಧ ಮಾಡಿದರು. ದೇವರು ಬಂದಾಗ ದೊಡ್ಡದೊಂದು ಪಟ್ಟಿಯನ್ನು ಕೊಟ್ಟರು. ಪಟ್ಟಿ ಓದಿದ ಬ್ರಹ್ಮದೇವ ನಾಪತ್ತೆ!
ಯಾಕೆ ಅಂದ್ರೆ: ಮರೆವಿನಲ್ಲಿ ಗೌಡರು ತಮ್ಮ ಬೇಡಿಕೆ ಪಟ್ಟಿ ಬದಲು, ಜೆಡಿಎಸ್ ಪ್ರಣಾಳಿಕೆ ಪಟ್ಟಿಯನ್ನು ಕೊಟ್ಟಿದ್ದರು!
*
ಯಡ್ಡಿ ಖುಷಿ!
ಯಡಿಯೂರಪ್ಪ ಬಲು ಖುಷಿಯಲ್ಲಿದ್ದರು. ಈ ಹಿಂದೆ ಎರಡೂ ಕಿವಿಗೆ ದೇವೇಗೌಡರು ಹೂವು ಮುಡಿಸಿದ್ದಾರೆ. ಎರಡೂ ಕಿವಿ ಖಾಲಿಯಿಲ್ಲದ ಕಾರಣ, ಮುಂದಿನ ಸಲ ಗೌಡರ ಹೂವು ಮುಡಿಸೋ ಪ್ರಯತ್ನ ಫಲಿಸೋದಿಲ್ಲ ಅನ್ನೋದು ಅವರ ನಂಬಿಕೆ. ಆದರೆ ದೇವೇಗೌಡರು ಈ ಸಲ ಹೂವಿಡೋ ಹಳೇ ಐಡಿಯಾ ಪಕ್ಕಕ್ಕಿಟ್ಟು, ನಾಮ ಹಾಕಲು ಮುಂದಾಗಿದ್ದಾರೆ. ತಿರುಪತಿಯಿಂದ ಒಂದು ಲೋಡು ನಾಮದ ಉಂಡೆ ತರಿಸಿದ್ದಾರೆ ಅನ್ನೋದು ಅವರಿಗೆ ಗೊತ್ತಿರಲಿಲ್ಲ!
*
ಹಡಗಲ್ಲಿ ನಾಡಿನ ನಾಯಕರು!
ದೇವೇಗೌಡ, ಎಸ್.ಎಂ.ಕೃಷ್ಣ, ಯಡಿಯೂರಪ್ಪ, ಖಗೆ, ಧರ್ಮಸಿಂಗ್ ಸೇರಿದಂತೆ ನಾಡಿನ ಪ್ರಮುಖರೆಲ್ಲರೂ ಹಡಗು ಹತ್ತಿದ್ದರು. ಒಂದು ತೂತಿನ ಪರಿಣಾಮ ನೀರು ಒಳ ಬರುತ್ತಿತ್ತು. ಒಂದು ವೇಳೆ ಹಡಗು ಮುಳುಗಿದರೆ ಯಾರು ಉಳಿಯುತ್ತಾರೆ?
ತುಂಟ ಮತದಾರನ ಉತ್ತರ : ಯಾರು ಉಳಿಯುವರೋ ಖಾತ್ರಿ ಇಲ್ಲ, ಕನ್ನಡಿಗರಂತೂ ಉಳಿಯುತ್ತಾರೆ!
*
ಎಲೆಕ್ಷನ್ ಗಾದೆಗಳು
* ಮತದಾರರಿಗೊಂದು ಕಾಲ, ಎಂಎಲ್‌ಎಗಳಿಗೊಂದು ಕಾಲ!
* ಬಿ ಫಾರಂಗೋದ ಮಾನ, ಇನ್ನೊಂದು ಪಕ್ಷಕ್ಕೆ ಜಿಗಿದರೆ ಬರುತ್ತಾ?
* ಎಲ್ಲಾ ಶಾಸಕರ ಮನೆ ದೋಸೆಯೂ ತೂತೇ.
* ಗೆದ್ದ ಪಕ್ಷದ ಬಾಲ ಹಿಡಿ
* ಗೆಲ್ಲರಾರದ ಅಭ್ಯರ್ಥಿ ಕ್ಷೇತ್ರ ಡೊಂಕು ಎಂದ!
Saturday, May 10, 2008
Subscribe to:
Post Comments (Atom)
1 comment:
ಹುಡುಗ ಹುಡುಗಿ ಸಿನೆಮಾ ನೋಡಲು ಬಂದಿದ್ದರು.
ಹುಡುಗಿ ಸ್ಕರ್ಟು ತೊಟ್ಟಿದ್ದಳು. ಹುಡುಗನ ಬಲವಂತಕ್ಕೆ ಮಣಿದು ಸ್ಕರ್ಟಿನೊಳಗೆ ಏನನ್ನೂ ತೊಡದೆ ಬಂದಿದ್ದಳು.
ಸಿನೆಮಾ ಶುರುವಾಯಿತು. ಕತ್ತಲಲ್ಲಿ ಸೊಳ್ಳೆಯೊಂದು ಹುಡುಗಿಯ ಸ್ಕರ್ಟಿನೊಳಗೆ ಹೊಕ್ಕಿತ್ತು. ಸೊಳ್ಳೆ ಎಲ್ಲಿ ಕಚ್ಚಿರಬಹುದು ಊಹಿಸಿ ಹೇಳಿ ನೋಡೋಣ ?
—ಊಹಿಸಿ—
—ಊಹಿಸಿ—
—ಊಹಿಸಿ—
ಥೂ, ಅದಲ್ಲ ! ನೀವು ಸಕ್ಕತ್ ಪೋಲಿ
ಸೊಳ್ಳೆ ಕಚ್ಚಿದ್ದು ಹುಡುಗನ ಕೈ ಬೆರಳನ್ನ
Post a Comment